Nava Karnataka 2025
ಭೇಟಿಕೊಟ್ಟವರ ಸಂಖ್ಯೆ
  • : 614405

FAQ

ನವ ಕರ್ನಾಟಕ ಎಂದರೇನು ?

‘ನವ ಕರ್ನಾಟಕ ೨೦೨೫’ ಯೋಜನೆಯು ಕರ್ನಾಟಕ ರಾಜ್ಯಕ್ಕೆ ೨೦೨೫ ಮುನ್ನೋಟ ದಾಖಲೆಯನ್ನು ರೂಪಿಸುವ ವಿನೂತನ ಪ್ರಯತ್ನವಾಗಿದೆ. ೨೦೨೫ರ ಹೊತ್ತಿಗೆ ರಾಜ್ಯದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಮತ್ತು ಸಾಧನೆಗಳನ್ನು ಪಟ್ಟಿ ಮಾಡಿ ರಾಜ್ಯಕ್ಕೆ ದೃಷ್ಟಿ ದಾಖಲೆಯನ್ನು ರಚಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ.

ಇದು ಹೇಗೆ ಎಲ್ಲರನ್ನು ಒಳಗೊಂಡ ಕಾರ್ಯಸಾಧನೆಯಾಗುತ್ತದೆ ?

ಸುಸ್ಥಿರ ಮತ್ತು ಏಕೀಕೃತ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರು ಮಾಡುವುದು ಇದರ ಮುಖ್ಯ ಉದ್ದೇಶವಾಗಿದ್ದು ಎಲ್ಲರೂ ಭಾಗವಹಿಸುವ, ಸಲಹೆ ನೀಡುವ ಹಾಗೂ ತೊಡಗಿಕೊಳ್ಳುವಂತೆ ಮಾಡುವ ಮೂಲಕ  ಸರ್ಕಾರದೊಂದಿಗೆ ಹೆಜ್ಜೆ ಹಾಕಬೇಕಾಗಿದೆ. ‘ಅಗತ್ಯತೆ ಆಧಾರಿತ’ ಆಡಳಿತದಿಂದ 'ಸಾಧನೆ ಪ್ರೇರಿತ' ಆಡಳಿತದ ಕಡೆಗೆ  ಪರಿವರ್ತನೆ ತರುವುದು ಇದರ ಮುಖ್ಯ ಗುರಿಯಾಗಿದೆ. ಈಗಾಗಲೇ ನಾವು ನಾಗರಿಕರನ್ನು ತಲುಪಿದ್ದು ವಿವಿಧ ವಿಧಾನಗಳಲ್ಲಿ ಅವರ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಪಡೆಯುತ್ತಿದ್ದೇವೆ. ನಾಗರೀಕರ ಆಲೋಚನೆಗಳನ್ನು ತಿಳಿಯಲು ಪ್ರತಿ ಜಿಲ್ಲೆಯಲ್ಲೂ ಕಾರ್ಯಾಗಾರಗಳನ್ನು ಆಯೋಜಿಸಿದ್ದೇವೆ. ಅವರೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಾಧಿಸಿ ವೆಬ್ ಸೈಟ್ ಮೂಲಕ ನಿರಂತರ ಅಪ್ ಡೇಟ್ ನೀಡುತ್ತಿದ್ದೇವೆ. ಇದರ ಉದ್ದೇಶ ಎಲ್ಲ ವರ್ಗದ ನಾಗರಿಕರನ್ನೂ ತೊಡಗಿಸಿಕೊಂಡು “ವಿಷನ್ 2025” ಅನ್ನು ನಿಜವಾದ ‘ಜನತೆಯ ದಾಖಲೆ' ಯಾಗಿಸುವುದು.

ವಿಷನ್ ದಾಖಲೆಯನ್ನು ರೂಪಿಸುವ ಮಾರ್ಗವೇನು ?

ಮುನ್ನೋಟ ಕೈಪಿಡಿಯನ್ನು ಎಲ್ಲ ಹಂತಗಳಲ್ಲೂ ವ್ಯಾಪಕ ಸಲಹೆ ಸಂಪರ್ಕ ಸಭೆಗಳ ಮೂಲಕ ರೂಪಿಸಲಾಗುತ್ತದೆ. ಸಾರ್ವಜನಿಕರ ಸಲಹೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು, ಸಂಘಟನೆಗಳು ಅಲ್ಲದೆ ವಿವಿಧ ಏಜೆನ್ಸಿಗಳು ಮತ್ತು ವಲಯವಾರು ಸಂಸ್ಥೆಗಳು ಮತ್ತು ಆಸಕ್ತಿಯ ಗುಂಪುಗಳು, ಪ್ರಾತಿನಿಧಿಕ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಆಪ್ಗಳ ಸೃಷ್ಟಿ ಮತ್ತು ಐಡಿಯಾಗಳನ್ನು ಹುಟ್ಟುಹಾಕಲು ಸಾಧನಗಳನ್ನು ಸೃಷ್ಟಿಸಲಾಗುತ್ತದೆ. ಎಲ್ಲ ವಿಭಾಗಗಳ ಅಗತ್ಯಗಳನ್ನು ಕಂಡುಕೊಳ್ಳುವ ಮೂಲಕ ಕೈಪಿಡಿಯನ್ನು ಪೂರ್ಣಗೊಳಿಸಲಾಗುತ್ತದೆ.

ನಾನು ಇದರ ಭಾಗವಾಗುವುದು ಹೇಗೆ ?

ನಮ್ಮ ಜಾಲತಾಣದಲ್ಲಿ "ಐಡಿಯಾ ಪೆಟ್ಟಿಗೆ" ಎಂಬ ಕೊಂಡಿಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನೂ ನೀಡಬಹುದು. ರಾಜ್ಯದ ಅಭಿವೃದ್ಧಿಯ ಸಾಧನೆಗೆ ನಿಮ್ಮಲ್ಲಿರುವ ಕ್ರಿಯಾತ್ಮಕ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಅಲ್ಲದೆ ನಮ್ಮ ಸಾಮಾಜಿಕ ಜಾಲತಾಣದ ಪುಟಗಳನ್ನೂ ನಿಮ್ಮ ಸಲಹೆ ತಿಳಿಸಲು ಬಳಸಬಹುದು. ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು ಈ ವಿನೂತನ ಯೋಜನೆಯ ಮುಖ್ಯ ಭಾಗವಾಗಬಹುದು.

ಈ ಯೋಜನೆಯ ಅಂಗವಾಗಿ ಯಾವೆಲ್ಲ ಕಾರ್ಯಕ್ರಮಗಳು ಜರುಗಿವೆ ?

ನವ ಕರ್ನಾಟಕ ವಿಷನ್ ೨೦೨೫ ಯೋಜನೆಗೆ ಸೆಪ್ಟೆಂಬರ್ ೨೫, ೨೦೧೭ ರಂದು ಮಾನ್ಯ ಮುಖ್ಯಮಂತ್ರಗಳು ಚಾಲನೆ ನೀಡಿದರು.

ನಾಡಿನ ಜನರ ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಕಾರ್ಯಗಾರಗಳನ್ನು ನಡೆಸಿ, ವಿಷಯ ತಜ್ಞರ ಅಭಿಪ್ರಾಯ ಅರಿಯಲು ೧೩ ವಲಯ ಕಾರ್ಯಗಾರಗಳನ್ನು ಯಶಸ್ವಿಯಾಗಿ ನಡೆಸಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವ ವಿಶೇಷ ಮತ್ತು ವಿನೂತನ ಸಲಹೆಗಳನ್ನು ಪಡೆದಿದ್ದೇವೆ. ವಿವಿಧ ವಯೋಮಾನದವರನ್ನು ಒಳಗೊಂಡು ದೃಷ್ಟಿ ದಾಖಲೆ ನಿರ್ಮಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು, ಕಾಲೇಜು ಯುವಕರಿಗೆ ಪ್ರಬಂಧ ರಚನೆ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ.

ಏಳು ವರ್ಷಕ್ಕೆ ಮುನ್ನೋಟ ಬರೆಯುವ ಕಾರಣವೇನು ?

ಭಾರತದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ನೀತಿ ಆಯೋಗವು ರಚಿಸಿರುವ ಏಳು ಅಂಶಗಳ ಕಾರ್ಯಸೂಚಿಗೆ ಹೊಂದುವಂತೆ ವಿಷನ್ ೨೦೨೫ ಯೋಜನೆಯನ್ನು ರೂಪಿಸಲಾಗಿದೆ.

೧೩ ವಲಯಗಳನ್ನು ಗುರುತಿಸಿರುವ ಪರಿಯೇನು ?

ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯ ಮೇಲೆ ಆಧಾರಿತವಾಗಿ, ಮುಂದಿನ ೨೦-೩೦ ವರ್ಷಗಳಲ್ಲಿ ರಾಜ್ಯದಲ್ಲಾಗಬೇಕಿರುವ ಗುರುತರ ಬದಲಾವಣೆಗಳನ್ನು ಸಂಯೋಜಿಸಿ, ಅದಕ್ಕೆ ಪೂರಕವಾದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಭವಿಷ್ಯಕ್ಕೆ ಸಹಕಾರಿಯಾಗುವಂತೆ ೧೩ ವಲಯಗಳಲ್ಲಿ ವಿಂಗಡಿಸಲಾಗಿದೆ. ಈ ಉಪಕ್ರಮವು ಸರ್ಕಾರದ ಯೋಜನೆಗಳನ್ನು ನಿರ್ದಿಷ್ಟ ಸಾಧನ ಮಟ್ಟ ತಲುಪುವಂತೆ ಮಾಡುತ್ತದೆ.

ವಿಷನ್ ೨೦೨೫ ದಾಖಲಾತಿಯು ಯಾರಿಗೆ ಸಹಕಾರಿಯಾಗಲಿದೆ?

ವಿಷನ್ ದಾಖಲಾತಿಯು ರಾಜ್ಯದಲ್ಲಿ ಯೋಜನೆಗಳನ್ನು ರೂಪಿಸಲು, ನಿರೂಪಿಸಲು ಮತ್ತು ನಿರ್ಣಯಿಸಲು ಮೂಲವಸ್ತುವಾಗಲಿದೆ. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಇದರ ಪ್ರಯೋಜನ ಪರಿಣಾಮಕಾರಿಯಾಗಿ ಸಿಗಲಿದೆ. ವಿಷನ್ ದಾಖಲೆಯಲ್ಲಿ ಪ್ರಸ್ತುತಗೊಂಡಿರುವ ಜನರ ಆಕಾಂಕ್ಷೆಗಳನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುವುದಲ್ಲದೆ, ಜನಮನ ದನಿಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾರೆ.

ಪ್ರಗತಿಪರ ಚಿಂತಕರ ಕೈಪಿಡಿಯಾಗುವ ಈ ದಾಖಲೆಯು, ಸಂಶೋಧಕರಿಗೆ ಸಹಕಾರಿಯಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಆಯಕಟ್ಟಿನ ಮಾಹಿತಿಯನ್ನು ಒದಗಿಸುವುದಲ್ಲದೆ, ರಾಜ್ಯದ ಅಭಿವೃದ್ಧಿಯ ಹಾದಿಯನ್ನು ಸಮರ್ಪಕವಾಗಿ ಅರ್ಥ ಮಾಡಿಸಬಲ್ಲ ಶಕ್ತಿಯನ್ನು ಹೊಂದಿದೆ.

ಈ ಯೋಜನೆಯ ಕಾಲಾವಧಿಯೇನು ?

ವಿಷನ್ ೨೦೨೫ ಯೋಜನೆಯು ಏಳು ವರ್ಷಗಳ ಯಶೋಗಾಥೆಗೆ ಮುನ್ನೋಟವನ್ನು ನೀಡಲಿದ್ದು, ಡಿಸೆಂಬರ್ ೩೧ ೨೦೧೭ ರ ಹೊತ್ತಿಗೆ ದಾಖಲಾತಿಯ ಕೆಲಸ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾ ?

ಹೌದು, ನಾವು ಫೇಸ್ಬುಕ್, ಟ್ವಿಟ್ಟರ್ ಹಾಗು ಯೌಟ್ಯೂಬ್ ನಲ್ಲಿ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಪುಟಗಳನ್ನೂ ತೆರೆದಿದ್ದೇವೆ. ನೀವು ಈ ಮೂಲಕ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಬಹುದು.

ನವ ಕರ್ನಾಟಕ ೨೦೨೫ರ ಕುರಿತು ಏನಾದರೂ
ನಿಮ್ಮ ಕುರಿತು