ವಲಯ ಕಾರ್ಯಾಗಾರ - ಕೈಗಾರಿಕೆ ಅಭಿವೃದ್ಧಿ | Nava Karnataka 2025
ಭೇಟಿಕೊಟ್ಟವರ ಸಂಖ್ಯೆ
 • : 614377

ವಲಯ ಕಾರ್ಯಾಗಾರ - ಕೈಗಾರಿಕೆ ಅಭಿವೃದ್ಧಿ


Back

ನಡಾವಳಿಗಳು

ಕಾರ್ಯಾಗಾರದ ಉದ್ದೇಶ:

     ವಲಯವಾರು ಕಾರ್ಯಾಗಾರದ ಉದ್ದೇಶ ಉದ್ಯಮದ ವಿವಿಧ ಪ್ರತಿನಿಧಿಗಳನ್ನು ಒಗ್ಗೂಡಿಸುವುದು ಮತ್ತು ಪ್ರಮುಖ ವಲಯವಾರು ಸವಾಲುಗಳು ಮತ್ತು ಸಂಭವನೀಯ ಪರಿಹಾರಗಳು ಮತ್ತು 2025ಕ್ಕೆ ಈ ವಲಯದ ಪ್ರಮುಖ ಮುನ್ನೋಟ ಏನೆಂದು ಮಂಥನ ನಡೆಸುವುದು.
ಸಮಯ ಮತ್ತು ದಿನಾಂಕ: 10:30-16:35 ಗಂಟೆಗಳು, ಸೆಪ್ಟೆಂಬರ್ 22, 2017
ಸ್ಥಳ: ಜೆಡಬ್ಲ್ಯೂ ಮಾರಿಯಟ್, ಬೆಂಗಳೂರು
ಸಭೆಯ ಮಾದರಿ: ಪರಸ್ಪರ ಸಮ್ಮುಖ
ನಿರ್ವಹಣೆ: ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)

ಸಭೆಯ ಟಿಪ್ಪಣಿಗಳು

     ಪ್ರಧಾನ ಕಾರ್ಯದರ್ಶಿ ಮತ್ತು ವಿಷನ್ 2025 ಪ್ರಾಜೆಕ್ಟ್ ಸಿಇಒ ಶ್ರೀಮತಿ ರೇಣುಕಾ ಚಿದಂಬರಂ, ಐಎಎಸ್, ಅವರು ಭಾಗವಹಿಸಿದ ಎಲ್ಲರಿಗೂ ವಿಷನ್ 2025 ಕೈಪಿಡಿಯ ಹಿನ್ನೆಲೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಈ ಮುನ್ನೋಟದ ಪ್ರಕ್ರಿಯೆ, ಅದರ ಉದ್ದೇಶ ಮತ್ತು ಹೇಗೆ ಮುನ್ನೋಟ ಕೈಪಿಡಿಯನ್ನು  ನಾಗರಿಕರು(ಮಹಿಳೆಯರು, ಯುವಜನರು, ಹಿರಿಯ ನಾಗರಿಕರು, ದುರ್ಬಲ ವರ್ಗದವರು ಇತ್ಯಾದಿ), ಶೈಕ್ಷಣಿಕ ವಲಯ, ಕಂಪನಿಗಳು, ನಾಗರಿಕ ಸಮಾಜಗಳು, ಸರ್ಕಾರದ ಲಾಖೆಗಳು ಮತ್ತಿತರರನ್ನು ಒಳಗೊಂಡು ವಿವಿಧ ಪಾಲುದಾರರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಸೆರೆ ಹಿಡಿಯಲಿದೆ ಎಂದು ವಿವರಿಸಿದರು.
     ಉದ್ಘಾಟನಾ ಭಾಷಣದ ನಂತರ ಕರ್ನಾಟಕದ ಕೈಗಾರಿಕೆಗಳ ಕುರಿತಾದ ಸ್ಥೂಲನೋಟವನ್ನು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಮಂಡಿಸಿತು. ನಂತರ ಭಾಗವಹಿಸಿರುವವರನ್ನು ಮೂರು ವಿಷಯಗಳ ಆಧರಿಸಿ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಯಿತು: ನೀತಿಗಳು(ಉದ್ಯಮ ನಿರ್ವಹಣೆ ಸರಳಗೊಳಿಸುವುದು), ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳು ಹಾಗೂ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರ ಎಂದಿದ್ದು ಸವಾಲುಗಳು ಮತ್ತು ಸಂಭವನೀಯ ಪರಿಹಾರಗಳನ್ನು ಕುರಿತಾಗಿ ಚರ್ಚಿಸಲಾಯಿತು. ವಿಷಯವಾರು ಚರ್ಚೆಗೊಳಗಾದ ಅಂಶಗಳು ಹೀಗಿವೆ:

 

ಪ್ರಮುಖ ಮುಖ್ಯಾಂಶಗಳು

ಮೂಲಸೌಕರ್ಯ, ಮಾನವ ಸಂಪನ್ಮೂಲಗಳು ಮತ್ತು ಇತರೆ

ಸವಾಲುಗಳು ಪರಿಹಾರ
 • ಕಾರ್ಯಪಡೆಯಲ್ಲಿ ಎಷ್ಟು ಜನರಿದ್ದಾರೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಹಿನ್ನೆಲೆಯಲ್ಲಿ ಎಷ್ಟು ಮಂದಿ ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸತತವಾಗಿ ಪಡೆಯಬೇಕು.
 • ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸುಧಾರಣೆ ಅಗತ್ಯ. ಆದರೆ ಇದಕ್ಕೆ ಸಂಬಂಧಿಸಿದಂತೆ ಪ್ರಮಾಣವನ್ನು ಕಡಿಮೆ ಮಾಡದಿರುವಂತೆ ಎಚ್ಚರಿಕೆ ವಹಿಸಬೇಕು.
 • ಉದ್ಯೋಗದ ಬೇಡಿಕೆಗಳ ಕುರಿತು ಮಾಹಿತಿಯ ಕೊರತೆ: ಲಭ್ಯವಿರುವ ಉದ್ಯೋಗಗಳು, ಪರಿಹಾರ, ಸ್ಥಳ, ಅರ್ಹತೆಯನ್ನು ಆಗಾಗ್ಗೆ ಪಡೆದುಕೊಳ್ಳಬೇಕು ಮತ್ತು ಪ್ರಕಟಿಸಬೇಕು.
 • ಶಾಲೆ ಬಿಡುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕು.
 • ಶೇ.90ರಷ್ಟು ಉದ್ಯೋಗಿಗಳು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅಧಿಕೃತ ಸರ್ಟಿಫಿಕೇಟ್ ಪಡೆದಿಲ್ಲ. ಆದರೆ ಕೌಶಲ್ಯ ಹೊಂದಿರುತ್ತಾರೆ. ಅಸಂಘಟಿತ ವಲಯಕ್ಕೆ ಹೆಚ್ಚು ಗಮನ ಅಗತ್ಯ.
 • ಸೀಮಿತ ಕೈಗಾರಿಕೆಗಳಿಂದ ಸಣ್ಣನಗರಗಳಲ್ಲಿ ತಕ್ಕಷ್ಟು ಉದ್ಯೋಗಾವಕಾಶಗಳಿಲ್ಲ.
 • ಉನ್ನತ ಶಿಕ್ಷಣದ ಪ್ರಸ್ತುತತೆ ಕುರಿತು ವಿವರವಾದ ಅಧ್ಯಯನ ನಡೆಸಬೇಕು.
 • ಸಿಬ್ಬಂದಿಗಳ ಬೋಧನಾ ಸಾಮರ್ಥ್ಯ ಅತಿದೊಡ್ಡ ಸವಾಲು.
 • ಮೌಲ್ಯ ಸರಣಿಯಲ್ಲಿ ಬೆಳೆಯಲು ಯತ್ನಿಸುವ ಸಣ್ಣ ಉದ್ಯಮಗಳು ಮತ್ತು ಅವುಗಳ ತರಬೇತಿ
 • ತರಬೇತುದಾರರಿಗೆ 'ಗುಣಮಟ್ಟ'ದ ಮಾನದಂಡ ವ್ಯಾಖ್ಯಾನಿಸಲಾಗಿಲ್ಲ.
 • ಶಿಕ್ಷಕರನ್ನು ಚುನಾವಣೆಯಿಂದ ಲಸಿಕೆ ಹಾಕುವವರೆಗೂ ಎಲ್ಲದಕ್ಕೂ ಸುಲಭವಾಗಿ ತೊಡಗಿಸಬಲ್ಲ ಕಾರ್ಯಪಡೆಯಾಗಿದ್ದಾರೆ.
 • ಕೇಂದ್ರ ವಿದ್ಯಾಲಯಗಳು(ಕೇಂದ್ರ ಸರ್ಕಾರದ ಅಡಿ ಬರುವಂತಹವು) ಕೆಲ ಪ್ರದೇಶಗಳಲ್ಲಿ ಚೆನ್ನಾಗಿವೆ ಆದರೆ ಎಲ್ಲ ಕಡೆಯೂ ಇಲ್ಲ.

 

 

ಒಟ್ಟಾರೆ

 • ಎಲ್ಲ ತರಬೇತುದಾರರು/ಶಿಕ್ಷಕರು(ನಾಲೆಡ್ಜ್, ಅರ್ಹ, ಪ್ರಾಯೋಗಿಕ/ಉದ್ಯಮ ಕೇಂದ್ರಿತ, ಶಿಕ್ಷಣ ಕಲೆ)ಸರ್ಟಿಫಿಕೇಷನ್ ಕಡ್ಡಾಯಗೊಳಿಸಬೇಕು.
 • ಪ್ರತಿಯೊಬ್ಬರಿಗೂ ಇಂಟರ್ನೆಟ್ ಲಭ್ಯವಿರಬೇಕು(ವಿಶ್ವದ ಗ್ರಂಥಾಲಯ)
 • ಪಠ್ಯಕ್ರಮ ಮತ್ತು ಶಿಕ್ಷಣ ಕಲೆಯನ್ನು ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸುಧಾರಿಸಬೇಕು
 • ಶಾಲೆಗಳಿಗೆ ಐಟಿ ಮೂಲಸೌಕರ್ಯವನ್ನು ಒದಗಿಸಬೇಕು
 • ಪ್ರತಿ ಶಾಲೆಯನ್ನೂ ಐಟಿ ಮೂಲಸೌಕರ್ಯದಿಂದ ಸಂಪರ್ಕಿಸುವ ಮೂಲಕ ಮೂಲಕ ಶಿಕ್ಷಣ ವಿಧಾನ ಇತ್ಯಾದಿಯನ್ನು ಪುನರಾವರ್ತಿಸಲು ಸನ್ನದ್ಧತೆ ನೀಡುವುದು
 • ದೂರ ಪ್ರದೇಶಗಳಲ್ಲಿ ವರ್ಚುಯಲ್ ತರಗತಿಗಳನ್ನು ಉತ್ತೇಜಿಸಬಹುದು
 • ಇಂಗ್ಲಿಷ್ ಭಾಷೆ ಮತ್ತು ಸಾಫ್ಟ್ ಸ್ಕಿಲ್ಸ್ ಕಡ್ಡಾಯಗೊಳಿಸಬೇಕು
 • ಶಾಲೆಗಳಿಗೆ ಗ್ರೇಡಿಂಗ್ ಸಿಸ್ಟಂ ಅಭಿವೃದ್ಧಿಪಡಿಸಬೇಕು ಅದೇ ರೀತಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಸಿಸ್ಟಂ ಅಗತ್ಯ
 • ಸರ್ಕಾರ ಶಾಲೆ ಬಿಟ್ಟ ಮಕ್ಕಳಿಗೆ ಶಾಲೆಗೆ ಉತ್ತೇಜಿಸಿ 2000ರೂ. ಸಹಾಯಧನ ನೀಡುವ ಮೂಲಕ ಮಕ್ಕಳು ಕುಟುಂಬಕ್ಕೆ ಹೊರೆಯಾಗದಂತೆ ನೋಡಿಕೊಳ್ಳಬೇಕು.
 • ವಲಯವಾರು ಉದ್ಯೋಗ ಬೇಡಿಕೆ ಮುನ್ಸೂಚನೆಯನ್ನು ಪ್ರಕಟಿಸಬೇಕು.
 • ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು.
 • ಕೆಲ ಐಟಿಐಗಳಲ್ಲಿ ಸಿಬ್ಬಂದಿಗಳು ಗುಣಮಟ್ಟ ಮತ್ತು ಪ್ರಮಾಣದಲ್ಲಿ ತಕ್ಕಷ್ಟಿಲ್ಲ.
 • ಋತು ಆಧರಿತ ಶಾಲಾ-ನಿರ್ಮಾಣ, ಕೃಷಿ... ಶಾಲೆ ನಡೆಸುವುದು.... ಆದಾಯ ಉತ್ಪತ್ತಿ ಮತ್ತು ಶಿಕ್ಷಣ ಪರಸ್ಪರ ಜೊತೆಯಲ್ಲಿ ಮುನ್ನಡೆಯಬೇಕು.
 • ಗುಣಮಟ್ಟ ಮತ್ತು ಪ್ರಮಾಣ ಕುರಿತಂತೆ ಸತತ ಡೇಟಾ ಸಂಗ್ರಹ
 • ಉದ್ಯಮ ಕೆಲ ಕಾಲೇಜುಗಳನ್ನು ದತ್ತು ಪಡೆಯಬಹುದು ಮತ್ತು ಕೆಲ ವಿಧದಲ್ಲಿ ಅಪ್ರೆಂಟಿಸ್ ಶಿಪ್ ನೀಡುವ ರೀತಿಯಲ್ಲಿ ನೆರವಾಗಬಹುದು.
 • ತಂತ್ರಜ್ಞಾನ ಬಳಸಿ ಖಾಸಗಿ ಕಂಪನಿಗಳ ಪಾಲುದಾರಿಕೆಯನ್ನು ಪರಿಣಾಮಕಾರಿ ಮಾದರಿಯಲ್ಲಿ ರೂಪಿಸಬೇಕು.
 • ಜಿಲ್ಲಾ ಮಟ್ಟದಲ್ಲಿ ಹಂಚಲಾದ ಪ್ರಯೋಗಾಲಯ ಅಭಿವೃದ್ಧಿಪಡಿಸಬೇಕು.
 • ಪಠ್ಯಕ್ರಮದಲ್ಲಿ ಸುಧಾರಣೆಗಳು ಅಗತ್ಯ
 • ಉತ್ತಮ ವೇತನ ನೀಡುವ ಮೂಲಕ ಶಿಕ್ಷಕರ ಗುಣಮಟ್ಟದ ಸಮಸ್ಯೆಯನ್ನು ಸುಧಾರಿಸಬಹುದು
 • ಶಿಕ್ಷಕರಿಗೆ ಪ್ರಾಯೋಗಿಕ ಅನುಭವವಿರಬೇಕು.
 • ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿಯ ಕ್ಷೇತ್ರದಲ್ಲಿ ಸಂಪರ್ಕಗಳನ್ನು ರೂಪಿಸಬೇಕು                                                 

ಪ್ರಾಥಮಿಕ ಶಿಕ್ಷಣ
ಶಾಲೆಗಳಲ್ಲಿ ಮೂಲಸೌಕರ್ಯವನ್ನು ಅದರ ಗಾತ್ರಕ್ಕೆ ಅನುಗುಣವಾಗಿ ಸುಧಾರಿಸಬೇಕು.
ಸ್ವಯಂ-ಕಲಿಕೆ/ಪ್ರೊ-ಆಕ್ಟಿವ್ ಕಲಿಕೆಯನ್ನು ಉತ್ತೇಜಿಸಬೇಕು.

ಪ್ರೌಢ ಶಿಕ್ಷಣ ಮತ್ತು ನಂತರ
ಉದ್ಯೋಗದ ಬೇಡಿಕೆಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪೂರೈಸಬೇಕು.
ಫ್ಲಿಪ್ ಪೆಡಗೋಗಿಯನ್ನು ಪರಿಚಯಿಸಬೇಕು.

ಉನ್ನತ ಶಿಕ್ಷಣ
ಉದ್ಯೋಗ ಆಧರಿತ ತರಬೇತಿ/ಪಠ್ಯಕ್ರಮ
ಉದ್ಯೋಗದ ಅಗತ್ಯ ಕುರಿತಾದ ಮಾಹಿತಿ ಲಭ್ಯತೆ
ಫ್ಲಿಪ್ ಪೆಡಗೋಗಿ
ಸಿಒಇ(ಸಿಬ್ಬಂದಿ/ತರಬೇತಿ) ಪ್ರಾರಂಭಿಸಬೇಕು

ವೃತ್ತಿಪರ ಸಂಸ್ಥೆಗಳು
ಉದ್ಯೋಗ ಆಧರಿತ ತರಬೇತಿಯನ್ನು ನೀಡಬೇಕು
ಪ್ರತಿ ಜಿಲ್ಲೆಯಲ್ಲೂ ಸೆಂಟರ್ ಆಫ್ ಎಕ್ಸೆಲೆನ್ಸ್ ಸೃಷ್ಟಿಸಬೇಕು

ಪಾಲುದಾರರ ನಡುವೆ ಜಂಟಿ ಕ್ರಿಯೆ ಸಹಯೋಗಕ್ಕೆ ಸರ್ಕಾರ ನೇತೃತ್ವ ವಹಿಸಬೇಕು

 

     ಆಕಾಂಕ್ಷೆಗಳು
 • 2025ರ ವೇಳೆಗೆ ಶೇ.100ರಷ್ಟು ಸಾಕ್ಷರತೆ ಪ್ರಮಾಣ ಪ್ರಮಾಣ ಸಾಧಿಸಬೇಕು ಮತ್ತು ಲಿಂಗಾಧಾರಿತವಾಗಿ ವ್ಯತ್ಯಾಸವಿರಬಾರದು.
 • ಕರ್ನಾಟಕ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಜಾಗತಿಕ ನಾಯಕಸ್ಥಾನದಲ್ಲಿರಬೇಕು

ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಆವಿಷ್ಕಾರ

ಸವಾಲುಗಳು    ಪರಿಹಾರ
 • ಹುಬ್ಬಳ್ಳಿಗೆ ಉತ್ತಮ ಸಂಪರ್ಕ, ರಾಜ್ಯದ ಮತ್ತೊಂದು ಕೇಂದ್ರವಾಗಿ ರೂಪಿಸಿದರೆ, ಈ ಕೆಳಕಂಡ ಸಮಸ್ಯೆಗಳಿವೆ- ವಿಮಾನ ನಿಲ್ದಾಣವಿಲ್ಲ, ರಸ್ತೆ ಪ್ರಯಾಣ ದೀರ್ಘ ಮತ್ತು ಸಂಕಷ್ಟಮಯ, ಗುಣಮಟ್ಟದ ಆರೋಗ್ಯಸೇವೆ ಅಥವಾ ವಸತಿ ಸೌಲಭ್ಯಗಳಿಲ್ಲ, ಗುಣಮಟ್ಟದ ಮನರಂಜನೆ, ಶಿಕ್ಷಣ ಇಲ್ಲ.
 • ಇತರೆ ನಗರಗಳಿಗೆ ಮುಂದುವರೆಯಬೇಕಾದರೆ ಹೆಚ್ಚುವರಿ ಪ್ರಚೋದನೆ ಅಗತ್ಯ
 • ಆರ್ ಅಂಡ್ ಡಿ ಅನುಮೋದನೆ ಪಡೆಯುವುದು ಅಡಚಣೆಯಾಗಿದೆ
 • ಆವಿಷ್ಕಾರ ಮತ್ತು ಆರ್ ಅಂಡ್ ಡಿಗಾಗಿ ಐಐಎಸ್ಸಿಯಂತಹ ಗುಣಮಟ್ಟದ ಸಂಸ್ಥೆಗಳನ್ನು ಹೆಚ್ಚಿಸಬೇಕು
 • ಬೆಂಗಳೂರಿನಲ್ಲಿ ವರ್ತುಲ ರಸ್ತೆಗಳು ಮತ್ತು ಬೈಪಾಸ್ ಗಳು, ಮೆಟ್ರೋ ಮತ್ತು ವಿಮಾನ ನಿಲ್ದಾಣ ಸಂಪರ್ಕ ಸುಧಾರಣೆಯಾಗಬೇಕು.
 • ಆರ್ ಅಂಡ್ ಡಿಯಲ್ಲಿ ಕೆಲಸ ಮಾಡುವವರಿಗೆ ಪ್ರೋತ್ಸಾಹ- ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಮತ್ತು ಉದ್ಯೋಗಿಗಳು ಇಲ್ಲದಿರುವ ಅಥವಾ ತಕ್ಕಷ್ಟು ಇಲ್ಲದಿರುವವರಿಗೆ ಕಡಿಮೆ ತೆರಿಗೆ ಪ್ರಮಾಣ
 • ಆವಿಷ್ಕಾರ ಮತ್ತು ಆರ್ ಅಂಡ್ ಡಿ ಉತ್ತೇಜಿಸುವ ಸ್ಟಾರ್ಟಪ್ ಗಳಿಗೆ ತೆರಿಗೆ ಪ್ರೋತ್ಸಾಹಗಳು ಮತ್ತು ಸುಲಭ ಸಾಲದ ಆಯ್ಕೆಗಳು
 • ಮೆಗಾಟ್ರಾನಿಕ್ಸ್, ರಕ್ಷಣೆ ಮತ್ತು ಕೃಷಿಯಂತಹ ಕೈಗಾರಿಕೆಗಳಿಗೆ ಪ್ಲಗ್ ಅಂಡ್ ಪ್ಲೇ ಸೆಂಟರ್ ಗಳಿಗೆ ಮೂಲಸೌಕರ್ಯ ಅಭಿವೃದ್ಧಿ
 • ಜಿಲ್ಲಾವಾರು ಇನ್ನೊವೇಷನ್ ಹಬ್ ಗಳನ್ನು ಸಂಸ್ಥೆಗಳಲ್ಲಿ ಪ್ರಾರಂಭಿಸುವ ಮೂಲಕ ಸರ್ಕಾರದ ಉದ್ಯಮಶೀಲತೆಯನ್ನು ಉತ್ತೇಜಿಸಬೇಕು. ಶಿಕ್ಷಣ ಮತ್ತು ಕೈಗಾರಿಕೆ ಮತ್ತು ಸರ್ಕಾರವನ್ನು ಒಗ್ಗೂಡಿಸಬೇಕು. ಅಂತಹ ಕೇಂದ್ರಗಳ ಮಾಲೀಕತ್ವ ಉದ್ಯಮ ಪರಿಣಿತರು ಮತ್ತು ಡಿಸಿ ಅವರಲ್ಲಿರಬೇಕು.
 • ಸ್ಟಾರ್ಟಪ್ ಗಳಿಗೆ ನೆರವು, ಸಬ್ಸಿಡಿ ಇತ್ಯಾದಿ ನೀಡುವ ಮೂಲಕ ತ್ತೇಜಿಸಬೇಕು.
 • ಎಲ್ಲ ಅಗತ್ಯ ಅನುಮೋದನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಇರಬೇಕು. ಅನುಮೋದನೆ ಪಡೆಯುವುದು ವಿಕೇಂದ್ರೀಕರಣ ಮತ್ತು ಡಿಜಿಟಲೈಸೇಷನ್ ಆಗಬೇಕು.
 • ಆವಿಷ್ಕಾರ ಮತ್ತು ಆರ್ ಅಂಡ್ ಡಿಯ ಅಂತಹ ಕೇಂದ್ರಗಳನ್ನು ರೂಪಿಸುವ, ಸುಧಾರಿಸುವ ಮತ್ತು ಹೆಚ್ಚಿಸುವ ನೀತಿಗಳನ್ನು ಸುಧಾರಿಸಬೇಕು.
 • ಯಾವುದೇ ರಾಜಕೀಯ ಹಿತಾಸಕ್ತಿ ಹೊಂದಿಲ್ಲದ ಅಂತಹ ಅಭಿವೃದ್ಧಿಯನ್ನು ಗಮನಿಸುವ ಸ್ವಾಯತ್ತ ಸಮಿತಿ ಪ್ರಾರಂಭಿಸಬೇಕು.

ಕಾರ್ಯತಂತ್ರ(ಸುಲಭ ವಹಿವಾಟಿನ ಅವಕಾಶ)

ಸವಾಲುಗಳು    ಪರಿಹಾರ
 • ಉದ್ಯಮವನ್ನು ಉತ್ತೇಜಿಸಲು ಮೂಲಸೌಕರ್ಯ ಸಮರ್ಪಕವಾಗಿಲ್ಲ.
 • ನಿಯಮ ಹಾಗೂ ನಿಬಂಧನೆಗಳಿಗೆ ಸುಧಾರಣೆ ಅಗತ್ಯ
 • ಸುಲಭ ವಹಿವಾಟು ನಡೆಸಲು ಸೌಲಭ್ಯ
 • ಸರ್ಕಾರದ ಇಲಾಖೆಯಲ್ಲಿ ತಂತ್ರಜ್ಞರು ಮತ್ತು ಸಾಮಾನ್ಯತಾವಾದಿಗಳ  ನಡುವೆ ಸಮತೋಲನದಿಂದ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗುತ್ತದೆ ಮತ್ತು ಒಪ್ಪಿಕೊಳ್ಳಲಾಗುತ್ತದೆ.
 • ಕೈಗಾರಿಕಾ ಯೋಜನೆಗಳ ಪ್ರಗತಿಯ ಮೇಲ್ವಿಚಾರಣೆಗೆ ಸಾಂಸ್ಥಿಕ ವ್ಯವಸ್ಥೆಯ ಕೊರತೆ
 • ಕೈಗಾರಿಕಾ ವಲಯಗಳಿಗೆ ರಸ್ತೆ ಮತ್ತು ದೀಪಗಳ ಸೌಕರ್ಯ ಸುಧಾರಿಸಬೇಕು.
 • ಎಲ್ಲರಿಗೂ ಕೈಗೆಟುಕುವ ಮನೆಗಳನ್ನು ಪೂರೈಸಬೇಕು
 • ಕಾರ್ಮಿಕ ಕಾನೂನುಗಳು ಮತ್ತು ಸುಧಾರಣೆಗಳು
  • ಫ್ಯಾಕ್ಟರಿಗಳು ಮತ್ತು ಕೈಗಾರಿಕೆಗಳಿಗೆ ಅನುಕೂಲಕರ ಕಾನೂನುಗಳು ಮತ್ತು ನಿಯಂತ್ರಣಗಳ ವಿಸ್ತರಣೆ
  • ಸ್ವಯಂ-ಸರ್ಟಿಫಿಕೇಷನ್, ಅರ್ಜಿ ಸಲ್ಲಿಸುವಿಕೆ, ಶುಲ್ಕ ಪಾವತಿ ಇತ್ಯಾದಿಗಳ ಡಿಜಿಟಲೀಕರಣ.
  • ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಕಾಯ್ದೆಯ ಸುಧಾರಣೆ
  • ಅಪ್ರೆಂಟಿಸ್ ಶಿಪ್ ಕಾಯ್ದೆ-ತರಬೇತಿಗಳಿಗೆ ಮಾನ್ಯತೆ ನೀಡಿಲ್ಲ
 • ಮುಖ್ಯ ಕಾರ್ಯದರ್ಶಿ ಪ್ರಾಜೆಕ್ಟ್ ಗಳ ಮುಖ್ಯ ಲೆಕ್ಕಾಧಿಕಾರಿಯಾಗಿರುತ್ತಾರೆ
 • ಪರಿಗಣಿತ ಅನುಮೋದನೆಗಳನ್ನು ಒಳಗೊಳ್ಳಬೇಕು-ಇದರಿಂದ ಹೊಣೆ ಸರ್ಕಾರದ ಮೇಲಿರುತ್ತದೆ
 • ಹೊಸದಾಗಿ ರೂಪುಗೊಂಡ ಸಂಸ್ಥೆಗಳಿಗೆ ಬೆಂಬಲ ಮುಂದುವರಿಸಬೇಕು
 • ಎಲ್ಲ ವಿನಾಯಿತಿಗಳಿಗೆ ನೀಡಲಾದ ವಿವೇಚನಾ ಕಲಮುಗಳನ್ನು ನಿವಾರಿಸಿ ಮತ್ತು ಕಾನೂನುಗಳನ್ನು ಅಪ್ ಡೇಟ್ ಮಾಡಿ.
 • ಎಸ್ಎಂಇಗಳನ್ನು ಉತ್ತೇಜಿಸುವ ನೀತಿಗಳು ಮತ್ತು ಹೆಚ್ಚುವರಿಯಾಗಿ ಅಂಗೀಕಾರದ ಭಯ ನಿವಾರಣೆ
 • ಹಿಂದುಳಿದ ಪ್ರದೇಶಗಳಿಗೆ ಪರ್ಯಾಯ ಪ್ರಗತಿ ಕೇಂದ್ರಗಳನ್ನು ಗುರುತಿಸಬೇಕು
 • ಕರ್ನಾಟಕದ ಉತ್ಪಾದನಾ ಕೇಂದ್ರಗಳಿಗೆ ಮತ್ತಷ್ಟು ಮಾಡಬೇಕಾದ ಅಗತ್ಯವಿದೆ
 • ಹೂಡಿಕೆದಾರರಿಗೆ ಉದ್ಯೋಗ ಸೃಷ್ಟಿಸಲು ಉತ್ತೇಜನ ನೀಡಬೇಕು
   ಆಕಾಂಕ್ಷೆಗಳು

     ಎಲ್ಲ ಗಾತ್ರಗಳು ಮತ್ತು ಸಾಮರ್ಥ್ಯ ತಂತ್ರಜ್ಞಾನ ಪ್ರೇರಿತ ಉತ್ಪಾದನೆ ಮತ್ತು ಸೇವೆಗಳ ಉದ್ಯಮಕ್ಕೆ ಅತ್ಯಂತ ಅನುಕೂಲಕರ ಉದ್ಯಮ ನಿಯಂತ್ರಣ ಪರಿಸರ ನೀಡಬೇಕು.

ಭಾಗವಹಿಸಿದವರ ಪಟ್ಟಿ:

 1. ಶ್ರೀ.ಬಿ.ಇಂದುಶೇಖರ್, ಸಹ-ಸಂಚಾಲಕರು-ಸಿಐಐ ಎಂ.ಎಫ್.ಜಿ. ಪ್ಯಾನೆಲ್ ಮತ್ತು ವಿ.ಪಿ. & ಜಿ.ಎಂ., ವೋಲ್ವೋ ಕನ್ಸ್ ಟ್ರಕ್ಷನ್ ಎಕ್ವಿಪ್ ಮೆಂಟ್ ಇಂಡಿಯಾ
 2. ಶ್ರೀ ಟಿ.ಎಸ್.ಜೈಶಂಕರ್, ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.
 3. ಶ್ರೀ ಸುರೇಶ್ ಕುಮಾರ್ ಆರ್, ಚೀಫ್ ಟೆಕ್ನಾಲಜಿ ಆಫೀಸರ್, ಜಿಇ ಹೆಲ್ತ್ ಕೇರ್
 4. ಶ್ರೀ ಗೌತಮ್ ಬಿ.ಎ. ಮುಖ್ಯಸ್ಥರು-ಮ್ಯಾನುಫ್ಯಾಕ್ಚರಿಂಗ್ ಟೇಗುಟೆಕ್ ಇಂಡಿಯಾ ಪ್ರೈ.ಲಿ.
 5. ಶ್ರೀ ಜಿ.ಪಿ.ಚಂದ್ರ ಕುಮಾರ್, ಸಂಸ್ಥಾಪಕರು ಮತ್ತು ಸಿಇಒ ಸ್ಕಿಲ್ ಸಾನಿಕ್ಸ್
 6. ಶ್ರೀ ರಾಜೇಂದ್ರ ಹೆಗ್ಡೆ, ಜನರಲ್ ಮ್ಯಾನೇಜರ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.
 7. ಶ್ರೀ ಎವಿಎಂ ಮುರಳಿಸುಂದರಂ, ಆಡಳಿತ ಮಂಡಳಿ ಸದಸ್ಯರು, ಮಿಷನ್ ಏರೋಸ್ಪೇಸ್ ಫೌಂಡೇಷನ್ ಆಫ್ ಇಂಡಿಯಾ
 8. ಡಾ.ಎ.ಪ್ರೀತೀಶ್, ಮುಖ್ಯಸ್ಥರು- ಟ್ರೈನಿಂಗ್ ಪ್ರೆಸಿಡೆನ್ಸಿ ಕಾಲೇಜ್
 9. ಶ್ರೀ ರಂಜನ್ ಮನಿಶ್, ಮುಖ್ಯಸ್ಥರು- ಇಂಡಸ್ಟ್ರಿ ಇನ್ಸ್ ಟಿಟ್ಯೂಟ್ ಕೊಲಾಬರೇಷನ್ ನ್ಯೂ ಹೊರೈಝಾನ್ ಕಾಲೇಜ್ ಆಫ್ ಎಂಜಿನಿಯರಿಂಗ್
 10. ಶ್ರೀ ಸುಮಂತ್, ಜನರಲ್ ಮ್ಯಾನೇಜರ್, ಎಕ್ಸ್ಟರ್ನಲ್ ಅಫೇರ್ಸ್, ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ.
 11. ಶ್ರೀ ರಾಜೇಂದ್ರ ಡಿ. ಟ್ರೈನಿಂಗ್ ಅಂಡ್ ಪ್ಲೇಸ್ ಮೆಂಟ್ ಆಫೀಸರ್, ನ್ಯೂ ಹೊರೈಝಾನ್
 12. ಡಾ.ಶಿವ್ ಕೆ.ತ್ರಿಪಾಠಿ, ಸೀನಿಯರ್ ಪ್ರೊಫೆಸರ್ ಅಂಡ್ ಡೀನ್, ಸಿಎಂಆರ್ ಯೂನಿವರ್ಸಿಟಿ
 13. ಶ್ರೀ ಯೋಗೇಶ್ ವೋರಾ, ನಿರ್ದೇಶಕರು, ಇಂಡೊ ನಿಸ್ಸಾನ್ ಫುಡ್ಸ್
 14. ಶ್ರೀ ಗೀತಾ ಪಾಂಡಾ, ಅಧ್ಯಕ್ಷರು, ಇಂಡಿಯಾ ವಿಮೆನ್ ನೆಟ್ ವರ್ಕ್
 15. ಶ್ರೀ ಎಂ.ಡಿ. ರವಿ, ನಿರ್ದೇಶಕರು(ಫೈನಾನ್ಸ್), ವಿದ್ಯುಚ್ಛಕ್ತಿ ಇಲಾಖೆ, ಕರ್ನಾಟಕ ಸರ್ಕಾರ

ಡೌನ್ಲೋಡ್ ಮಾಡಬಹುದಾದ ಕಡತಗಳು

ಚಿತ್ರ ಸಂಪುಟ

ವಿಡಿಯೋಗಳು

ನಿಮ್ಮ ಮಾತಿರಲಿ