ರಾಜ್ಯಕ್ಕೆ ಏಳು ವರ್ಷದ ಅಭಿವೃದ್ಧಿಯ ಮುನ್ನೋಟ ಬರೆಯುವ ಯೋಜನೆಗೆ ಚಾಲನೆ | Nava Karnataka 2025
ಭೇಟಿಕೊಟ್ಟವರ ಸಂಖ್ಯೆ
  • : 614407

ರಾಜ್ಯಕ್ಕೆ ಏಳು ವರ್ಷದ ಅಭಿವೃದ್ಧಿಯ ಮುನ್ನೋಟ ಬರೆಯುವ ಯೋಜನೆಗೆ ಚಾಲನೆ


 

ಕರ್ನಾಟಕ ಸರ್ಕಾರವು ಇಂದು ರಾಜ್ಯದ ಮುಂದಿನ ಏಳು ವರ್ಷದ ಅಭಿವೃದ್ಧಿಯ ಮಾರ್ಗಸೂಚಿಯನ್ನು ನಿಗದಿಪಡಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದೆ. ನವ ಕರ್ನಾಟಕ 2025 (ವಿಷನ್ 2025) ವಿಷನ್ ದಾಖಲೆಯು ರಾಜ್ಯದ ನಾಗರಿಕನ ನಿರೀಕ್ಷೆಗಳನ್ನು ಸೆರೆಹಿಡಿಯುವ ವಿಶಿಷ್ಟ ಪ್ರಯತ್ನವಾಗಿದೆ. ವೈವಿಧ್ಯಮಯ ಸಾಮಾಜಿಕ ದೃಷ್ಟಿಕೋನ ಹೊಂದಿರುವ ಕನ್ನಡಿಗರ  ಆಕಾಂಕ್ಷೆಗಳನ್ನು ಸೆರೆಹಿಡಿದು, ರಾಜ್ಯದ ಪ್ರಗತಿಗೆ ನೀಲನಕ್ಷೆ ತಯಾರು ಮಾಡುವ ಉದ್ದೇಶವನ್ನು ಹೊಂದಿದೆ.

ವಿಷನ್ ೨೦೨೫ ಕೈಪಿಡಿಯು ಕರ್ನಾಟಕ ರಾಜ್ಯಕ್ಕೆ ಮುಂದಿನ ಏಳು ವರ್ಷಗಳಿಗೆ ಆಡಳಿತ ಕಾರ್ಯತಂತ್ರವನ್ನು ನೀಡುವ ಉದ್ದೇಶ ಹೊಂದಿದೆ. ಇದರ ವ್ಯಾಪ್ತಿಯು ವಿಸ್ತಾರವಾಗಿಯೂ ನಿರ್ದಿಷ್ಟವಾಗಿಯೂ ಇದ್ದು ರಾಜ್ಯದಲ್ಲಿನ ವಿವಿಧವಲಯಗಳ ಮತ್ತು ಹಿತಾಸಕ್ತಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. 'ಇದರಲ್ಲಿ ನನಗೇನಿದೆ ?' ಎಂಬ ಸಾಮಾನ್ಯ ನಾಗರಿಕನ ಪ್ರಶ್ನೆಗೆ ಉತ್ತರಿಸುವ ಉದ್ದೇಶವನ್ನು ಹೊಂದಿದೆ. ಇದೆ ತತ್ವವು ವಿಷನ್ ಕೈಪಿಡಿ ತಯಾರಿಕೆಯಪರಿಕಲ್ಪನೆ ಮತ್ತು ಮೂಲಶಕ್ತಿಯಾಗಿದೆ.

ಅಗತ್ಯಗಳ ಪ್ರೇರಣೆಯಿಂದ ಜಗತ್ತಿನ ಜನರ ಅದರಲ್ಲೂ ಯುವಜನರ ಆಕಾಂಕ್ಷೆಗಳು ಬದಲಾಗಿವೆ. ಇದೆಲ್ಲದರಿಂದ ತಂತ್ರಜ್ಞಾನ, ಮೊಬೈಲ್ ಟೆಲಿಫೋನಿ, ಕೇಬಲ್ ಟೀವಿ ಮತ್ತು ಇಂಟರ್ನೆಟ್ ಪ್ರೇರಿತವಾದ ಡಿಜಿಟಲ್ ಪರಿವರ್ತನೆಯುದಾಖಲೆಯ ಸಾಧನೆಯನ್ನು ಮಾಡಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಅಮೋಘ ಪಾತ್ರವನ್ನು ವಹಿಸಿ ಶ್ರೀಸಾಮಾನ್ಯನನ್ನು ಸಶಕ್ತನನ್ನಾಗಿಸಿದೆ. ಸಾರ್ವತ್ರಿಕವಾಗಿ ಜನರ ಹಕ್ಕು ಮತ್ತು ಅಧಿಕಾರಗಳ ಕುರಿತು ಜಾಗೃತಿ ಮತ್ತುತಿಳುವಳಿಕೆಯನ್ನು ಮೂಡಿಸುತ್ತಿದೆ, ಇದರಿಂದ ಸರ್ಕಾರವು ತನ್ನ ಗುರಿಗಳನ್ನು ಮತ್ತು ಫಲಿತಂಶಗಳನ್ನು ಜವಾಬ್ದಾರಿಯುತವಾಗಿ ಜನರ ಮುಂದಿಡಬೇಕೆಂದು ಜನರು ನಿರೀಕ್ಷಿಸುತ್ತಾರೆ.

ಸರ್ಕಾರವು ಸಾಮಾಜಿಕವಾಗಿ ಜಾಗೃತರಾಗಿರುವ ನಾಗರಿಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿ ಸಮಗ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂದರ್ಭ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಆದ್ದರಿಂದ ಆಡಳಿತದ ಎಲ್ಲ ಕ್ರಮಗಳುಸಾರ್ವಜನಿಕರ ಸೂಕ್ಷ್ಮದೃಷ್ಟಿಯನ್ನು ಎದುರಿಸಲಿದೆ. ಪ್ರತಿನಿತ್ಯದ ರಾಷ್ಟ್ರೀಯ ಸಾಧನೆಗಳು, ಸ್ಪರ್ಧಾತ್ಮಕ ಜಾಗತಿಕ ಸ್ಥಿತಿಗತಿಗಳು ಹಾಗು ಸದಾ ಕಾರ್ಯನಿರತ ಮಾಧ್ಯಮಗಳು ಮತ್ತು ಅಪಾರ ಭರವಸೆಗಳನ್ನು ಹೊತ್ತ ನಾಗರೀಕಸಮೂಹದ ಮುಂದೆ ಸರ್ಕಾರವು ಕೇವಲ ಆಡಳಿತ ನಡೆಸಿದರೆ ಸಾಲದು, ಬದಲಿಗೆ ವಿಕಾಸದ ಧ್ಯೇಯವಿರುವ ದೂರದೃಷ್ಠಿಯನ್ನು ಹೊಂದಿರಬೇಕು. ಈ ಮೂಲಕವಾಗಿ ವಿಕಾಸದ ಕೈಪಿಡಿಯನ್ನು ರೂಪಿಸುವ ಮತ್ತು ಅದನ್ನುಸಮರ್ಥವಾಗಿ ಸಾಧಿಸುವ ನಕಾಶೆಯನ್ನು ರೂಪಿಸಲಾಗುತ್ತಿದೆ.

ಮುನ್ನೋಟ ಕೈಪಿಡಿಯನ್ನು ಎಲ್ಲ ಹಂತಗಳಲ್ಲೂ ವ್ಯಾಪಕ ಸಲಹೆ ಸಂಪರ್ಕ ಸಭೆಗಳ ಮೂಲಕ ರೂಪಿಸಲಾಗುತ್ತದೆ. ಸಾರ್ವಜನಿಕರ ಸಲಹೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು, ಸಂಘಟನೆಗಳು ಅಲ್ಲದೆ ವಿವಿಧ ಏಜೆನ್ಸಿಗಳು ಮತ್ತು ವಲಯವಾರು ಸಂಸ್ಥೆಗಳು ಮತ್ತು ಆಸಕ್ತಿಯ ಗುಂಪುಗಳು, ಪ್ರಾತಿನಿಧಿಕ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಆಪ್ಗಳ ಸೃಷ್ಟಿ ಮತ್ತು ಐಡಿಯಾಗಳನ್ನು ಹುಟ್ಟುಹಾಕಲು ಸಾಧನಗಳನ್ನು ಸೃಷ್ಟಿಸಲಾಗುತ್ತದೆ. ಇದು ಅಭಿಪ್ರಾಯಗಳ ಸಂಗ್ರಹ ಮತ್ತು ಈ ಕೆಳಕಂಡ ವಿಭಾಗಗಳಲ್ಲಿ ಅಗತ್ಯಗಳನ್ನು ಕಂಡುಕೊಳ್ಳುವ ಮೂಲಕ ಕೈಪಿಡಿಯನ್ನು ಪೂರ್ಣಗೊಳಿಸಲಾಗುತ್ತದೆ.

ಚಿತ್ರ ಸಂಪುಟ

ವಿಡಿಯೋಗಳು

ನಿಮ್ಮ ಮಾತಿರಲಿ

Image CAPTCHA