ನಮ್ಮ ತಂಡ | Nava Karnataka 2025
ಭೇಟಿಕೊಟ್ಟವರ ಸಂಖ್ಯೆ
  • : 614411

ನಮ್ಮ ತಂಡ

ಚುಕ್ಕಾಣಿ ಸಮಿತಿ

ಹೆಚ್.ಡಿ.ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ವಿಷನ್ ಚುಕ್ಕಾಣಿ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದು, ಸಂಪುಟದ ಸಚಿವರು ಈ ಸಮಿತಿಯ ಸದಸರಾಗಿರುತ್ತಾರೆ. ವಿಷನ್ ಡಾಕ್ಯುಮೆಂಟ್ ಪ್ರಾಜೆಕ್ಟ್ ನ ಸಿಇಓ ರವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸದರಿ ಸಮಿತಿಯು "ದೃಷ್ಟಿಗೋಚರ" ಕಾರ್ಯಸಾಧನೆಗೆ ಆಯಕಟ್ಟಿನ ನಿರ್ದೇಶನ ಹಾಗು ಮಾರ್ಗದರ್ಶನ ನೀಡಲಿದೆ.

ಕಾರ್ಯನಿರ್ವಾಹಕ ಸಮಿತಿ

ಶ್ರೀ ಟಿ.ಎಂ.ವಿಜಯ ಭಾಸ್ಕರ್

ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು
ಕರ್ನಾಟಕ ಸರ್ಕಾರ

ರಾಜ್ಯ ಸರ್ಕಾರದ ಮಾನ್ಯ ಅಪರ ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರಾಗಿ ಮತ್ತು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಲಾಗಿದೆ. ವಿಡಿಪಿ ಯ ಸಿಇಓ ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಈ ಸಮಿತಿಯು ವಿಷನ್ ಡಾಕ್ಯುಮೆಂಟ್ ತಯಾರಿಕೆಯ ಮೇಲ್ವಿಚಾರಣೆ ಮಾಡಲಿದೆ.

ವಿಷನ್ ಕಚೇರಿ

ರೇಣುಕಾ ಚಿದಂಬರಂ

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ವಿಷನ್ ಕಚೇರಿ, ಕರ್ನಾಟಕ ಸರ್ಕಾರ

ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಷನ್ ಕಚೇರಿಯ ನೇತೃತ್ವವನ್ನು ವಹಿಸಲಿದ್ದು ನೇರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ವರದಿ ಒಪ್ಪಿಸಲಿದ್ದಾರೆ. ವಿಷನ್ ಕಚೇರಿಯು ವಿಷನ್ ಡಾಕ್ಯುಮೆಂಟ್ ತಯಾರಿಕೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ.